ಗಜಲ್

ಗಜಲ್ ಸ್ಮಿತಾ ಭಟ್ ಬೇಕೋ ಬೇಡವೋ ಈ ಬದುಕನ್ನು ನಡೆದೇ ಮುಗಿಸಬೇಕಿದೆ.ಕಾಲದ ಕಡುದಾರಿಯ ಕಳವಳಿಸದೇ ಮುಗಿಸಬೇಕಿದೆ ಉಯ್ಯಾಲೆ ಕಟ್ಟಿದ ರೆಂಬೆಯ ಮೇಲೆ ಅದೆಷ್ಟು ನಂಬಿಕೆಎರಗುವ ನಸೀಬನ್ನು ಎದೆಗುಂದದೇ ಮುಗಿಸಬೇಕಿದೆ. ಸುತ್ತಿ ಬಳಸುವ ದಾರಿಯಲಿ ಕಾಲಕಸುವು ಕಳೆಯದೇ ಇರದುಸಿಗದ ನೂರು ಬಯಕೆ ಕನಸನು ಕೊರಗದೇ ಮುಗಿಸಬೇಕಿದೆ. ಮೋಡ ಎಲ್ಲವನ್ನೂ ಶೂನ್ಯಗೊಳಿಸುವುದು ಕೆಲವೊಮ್ಮೆಮೆತ್ತಿಕೊಳ್ಳುವ ನೋವನು ಅಳುಕದೇ ಮುಗಿಸಬೇಕಿದೆ. ಹಿಂತಿರುಗಿದಾಗ ಎಷ್ಟೊಂದು ಏರಿಳಿತಗಳು ಬದುಕಿಗೆಯಾವ ಕಹಿಯನೂ ಉಳಿಸಿಕೊಳ್ಳದೇ ಮುಗಿಸಬೇಕಿದೆ. ರೆಕ್ಕೆ ಕಟ್ಟಿಕೊಂಡಾಗ ಜಗವದೆಷ್ಟು ಸೋಜಿಗ “ಮಾಧವ”ಈ ಖುಷಿಗೆ ಯಾರ ಹಂಗು,ವಿಷಾದವಿರದೇ ಮುಗಿಸಬೇಕಿದೆ … Continue reading ಗಜಲ್